Creative Living


Image of the Weekಸೃಜನಶೀಲ ಬದಕು
ಬರದವರು ಎಲಿಜಬೆತ್ ಗಿಲ್ಬರ್ಟ್

ನನ್ನನಂಬಿಕೆಯ ಪ್ರಕಾರ, ಸೃಜನಶೀಲ ಬದಕಿನ ಬಗೆಯ ಮೂಲಭೂತ ಪ್ರಶ್ನೆ ಏನೆಂದರೆ: ನೀವು, ನಿಮ್ಮೊಳಗಿನ ಕಣ್ಣಿಗೆ ಕಾಣಿಸದ ನಿಧಿಗಳನ್ನು ಮುಂದಕ್ಕೆ ತರುವ ಧೈರ್ಯ ಹೊಂದಿದ್ದೀರಾ?

ನೋಡಿ, ನಿಮ್ಮ ಒಳಗೆ ಏನು ಅಡಗಿದೇ ನನಗೆ ಗೊತ್ತಿಲ್ಲ, ನಿಮಗೂ ಅದರ ಬಗ್ಗೆ ಅರವಿರದಿರಬಹುದು. ಆದರೂ ನಿಮಗೆ ಅದರ ಸುಳುವಿದೆ ಎಂದು ನನ್ನ ಅನಿಸಿಕೆ. ನನಗೆ ನಿಮ್ಮ ಸಾಮರ್ಥ್ಯ, ನಿಮ್ಮ ಆಕಾಂಕ್ಷೆಗಳು, ನಿಮ್ಮ ಅಭಿಲಾಷೆಗಳು ಮತ್ತು ನಿಮ್ಮ ರಹಸ್ಯ ಪ್ರತಿಭೆಗಳ ಬಗ್ಗೆ ಗೊತ್ತಿಲ್ಲ. ಆದರೆ ಖಂಡಿತವಾಗಿಯೂ ಏನೋ ಒಂದು ಅದ್ಭುತ ನಿಮ್ಮ ಒಳಗೆ ಆಶ್ರಯ ಪಡೆದಿದೆ. ನಾನು ಇದನ್ನು ತುಂಬಾ ಆತ್ಮವಿಶ್ವಾಸದಿಂದ ಹೇಳುತೇನೆ. ಏಕೆಂದರೆ, ನಾನು ನಾವೆಲ್ಲ ಅಡಗಿರುವ ನಿಧಿಗಳ ಜೀವಂತ ಭಂಡಾರ ಎಂದು ನಂಬಿರುವವರಲ್ಲಿ ಒಬ್ಬ.
. ಇದು ಬ್ರಹ್ಮಾಂಡ, ತನ್ನ ಮನೋರಂಜನೆಗಾಗಿ ಮತ್ತು ನಮ್ಮ ಮನೋರಂಜನೆಗಾಗಿ, ಮಾನವರ ಮೇಲೆ ನಡೆಸುತಿರುವ ಹಳೆಯ ಮತ್ತು ಅತ್ಯಂತ ಉದಾರ ತಂತ್ರಗಳ ಒಂದು ಆಟ ಎಂದು ನನ್ನ ನಂಬಿಕೆ: ಬ್ರಹ್ಮಾಂಡವು ನಮ್ಮ ಒಳಗೆಲ್ಲೋ
ತುಂಬ ಆಳದಲ್ಲಿ ಆಭರಣಗಳನ್ನು ಅಡಗಿಸಿ, ನಾವು ಅದನ್ನು ಗುರುತಿಸಬಹುದೇ ಎಂದು ಹಿಂದಿನಿಂದ ಗಮನಿಸ್ಹುತಿದೆ.

ಈ ಅಡಗಿರುವ ಆಭರಣಗಳನ್ನುಹುಡುಕುವ ಪ್ರಯತ್ನವೇ ಸೃಜನಶೀಲ ಬದಕು - ಈ ಹಾದಿಯಲ್ಲಿ ದ್ಯರ್ಯವಾಗಿ ಹಾಕುವ ಮೊದಲ ಹೆಜ್ಜೆಯೇ ನಮ್ಮ ಸಾಮಾನ್ಯ ಬದಕನ್ನು ಮಂತ್ರ ಮುಗ್ದ ಮಾಡುತದೆ.

ಈ ಪರಿಶೋದವು ಆಗಾಗ್ಗೆ ಅಚ್ಚರಿ ಫಲಿತಾಂಶಗಳು ತರುತ್ತದೆ - ಅದನ್ನೇ ನಾನು ದೊಡ್ಡ ಮಂತ್ರಜಾಲ ಎಂದು ಕರೆಯುತ್ಹೇನೆ.

ನಾನು ಇಲ್ಲಿ "ಸೃಜನಶೀಲ ಬದುಕಿನ" ಬಗ್ಗೆ ಮಾತನಾದುತಿರುವಾಗ , ನಾನು ವೃತ್ತಿಪರವಾಗಿ ಅಥವಾ ಪ್ರತ್ಯೇಕವಾಗಿ ಕಲೆಗಳಿಗೆ ಮೀಸಲಾಗಿರುವ ಬದುಕಿನ ಬಗ್ಗೆಯಷ್ಟೇ ಮಾತಾಡುತ್ತಿಲ್ಲ. ಬಯಕ್ಕಿಂತಾ ಕುತೂಹಲ ತುಂಬಿರುವ ಜೀವನ ಶ್ಯಲಿಯ ಬಗ್ಗೆ ಮಾತಾದುತಿದ್ದೀನಿ..

ನಾನು ಇತ್ತೀಚಿನ ವರ್ಷಗಳಲ್ಲಿ ನೋಡಿದ ಸೃಜನಶೀಲ ಬದುಕಿನ ಉದಾಹರಣೆಗಳಲ್ಲಿ ಒಂದು ನನ್ನ ಸ್ನೇಹಿತೆ ಸೂಸನ್ ದು. ಅವರು 40 ವರ್ಷದವಳಾಗಿದ್ದಾಗ ಫಿಗರ್ ಸ್ಕೇಟಿಂಗ್ ಮಾಡಲುತೊಡಗಿದರು. ನಿಖರವಾಗಿ ಹೇಳಬೇಕೆಂದರೆ, ಅವರಿಗೆ ವಾಸ್ತವವಾಗಿ ಈಗಾಗಲೇ ಸ್ಕೇಟ್ ಮಾಡುವುದು ತಿಳಿದಿತ್ತು. ಬಾಲ್ಯದಲ್ಲಿ ಫಿಗರ್ ಸ್ಕೇಟಿಂಗ್ ಸ್ಪರ್ದೆಯಲ್ಲಿ ಬಾಗವಸಿದ್ದರು, ಆದರೆ ಅವರು ಒಂದು ಚಾಂಪಿಯನ್ ಎನ್ನುವಷ್ಟು ಪ್ರತಿಭೆ ಹೊಂದಿರಲಿಲ್ಲ ಸ್ಪಷ್ಟವಾದಾಗ, ಪ್ರೌಢಾವಸ್ಥೆಯಲ್ಲಿ ಫಿಗರ್ ಸ್ಕೇಟಿಂಗನ್ನು ತ್ರುಜಿಸಿದ್ದರು.

ಒಂದು ಮುಂದಿನ ಕಾಲು ಶತಮಾನದ ಸುಸಾನ್ ಸ್ಕೇಟ್ ಮಾಡಲಿಲ್ಲ. ಅವರ ೪೦ರ ವಯಸ್ಸಿನಲ್ಲಿ ಜೀವನ ತುಂಬಾ ಪ್ರಕ್ಷುಬ್ಧ ಆಗಿತ್ತು. ಅವರಿಗೆ ಮಂಕು ಮತ್ತು ಭಾರ ಎಂದು ಅನಿಸುತಿತ್ತು. ಅವರು ತನಗೆ ತಾನೆ ಯಾವಾಗ ಕೊನೆಯ ಬಾರಿ ಹಗುರವಾಗಿ, ಆಹ್ಲಾದಕರವಾiಗಿ ಅನುಬವವಾಗಿದ್ದು ಎಂದು ಪ್ರಶ್ನಿಸಿಕೊಂಡರು. ಇಂತಹ ಭಾವನೆಗಳನ್ನು ಹದಿಹರೆಯದವಲಾಗಿದ್ದಾಗ ಫಿಗರ್ ಸ್ಕೇಟಿಂಗನಲ್ಲಿ ಕೊನೆಯ ಬಾರಿ ಅನುಭವಿಸಿದ್ದು ಅರಿವಾದಾಗ ಅವರಿಗೆ ಆಘಾತವಾಯಿತು. ಅವರು ಇದು ಇಷ್ಟು ವರುಷ ತನ್ನ ಜೀವನದ ಈ ಅನ್ವೇಷಣೆಯಲ್ಲಿ ತನಗೆ ತಾನೆ ವಿದಿಸಿಕೊಂಡ ದಿಗ್ಬಂದನೆ ಎಂದು ದಿಗಿಲಾಯಿತು, ನಾನು ಇನ್ನೂ ಫಿಗರ್ ಸ್ಕೇಟಿಂಗಅನ್ನು ಪ್ರೀತಿಸುತ್ತಿದ್ದೆನೆಯೇ ಎಂದು ಕುತೂಹಲವಿತ್ತು.
.
ಈ ಕುತೂಹಲದಿಂದಲೇ ಹೊಸ ಜೋಡಿ ಸ್ಕೇಟ್ ಖರೀದಿಸಿದರು, ಸ್ಕೇಟ್ ಮಾಡುವ ಜಾಗವನ್ನು ಕಂಡುಕೊಂಡರು, ತರಬೇತುದಾರರನ್ನು ನೇಮಸಿಕೊಂಡರು. ತನ್ನೊಳಗೆ ಕೇಳುಸುತಿದ್ದ " ಈ ಅನುಚಿತ ಚಟುವಟಿಕೆ ನಡೆಸಲು ತಾನು ಸ್ವೇಚ್ಛಾಭೋಗಿ, ಅಸಂಬದ್ದ" ಎಂದು ಕೇಳುತಿದ್ದ ಒಳ ದ್ವನಿಯನ್ನು ನಿರ್ಲಕ್ಷಿಸಿದಳು. ಎಲ್ಲಾ ಚಿಕ್ಕ, ಹಗುರವಾದ ಒಂಬತ್ತು ವರ್ಷದ ಹುಡುಗಿಯರ ನಡುವೆ ಮಂಜುಗಡ್ಡೆಯ ಮೇಲೆ ತಾನೋಬ್ಬಲೇ ಮಧ್ಯವಯಸ್ಕ ಮಹಿಳೆ ಎಂಬ ತೀವ್ರವಾದ ಸ್ವಯಂ ಪ್ರಜ್ಞೆಯನ್ನು ಬದಿಯಲ್ಲಿಟ್ಲರು.

ಅವಳು ಅದನಷ್ಟೇ ಮಾಡಿದರು. (ಫಿಗರ್ ಸ್ಕೇಟಿಂಗ್).

ಸುಸಾನ್ ಒಂದು ವಾರದಲ್ಲಿ ಮೂರು ದಿನ ಬೆಳಗ್ಗೆ, ಮುಂಜಾನೆ ಎದ್ದು ಸ್ಕೇಟಿಂಗ್ ಹೋದರು. ಅವರು ಸ್ಕೇಟಿಂಗ್ ಅಭ್ಯಾಸ ಮಾಡಿದರು, ಅಭ್ಯಾಸ ಮಾಡಿದಳು, ಅಭ್ಯಾಸ ಮಾಡಿದರು. ಹೌದು, ಅವರಿಗೆ ತುಂಬ ಇಷ್ಟ ಆಯಿತು. ಎಂದಿಗಿಂತಲೂ ಇನ್ನಷ್ಟು, ಏಕೆಂದರೆ ಬಹುಶಃ, ಈಗ ವಯಸ್ಕರಾದುದರಿಂದ, ಅವರಿಗೆ ತನ್ನ ಸಂತೋಷದ ಮೌಲ್ಯವನ್ನು ಪ್ರಂಶಸಿಸುವ ದೃಷ್ಟಿಕೋನದಿಂದ ಅರಿವಿತ್ತು. ಸ್ಕೇಟಿಂಗ್ ಅವರಲ್ಲಿ ಜೀವತುಂಬಿ ಮತ್ತು ಕಾಲಾತೀತ ಮಾಡಿತು.

ಅವರು ತನ್ನ ದೈನಂದಿನ ಜವಾಬ್ದಾರಿಗಳನ್ನು ಮತ್ತು ಕರ್ತವ್ಯಕಿಂತ ಹೆಚ್ಚೇನೂ ಅಲ್ಲದ ಗ್ರಾಹಕ ಎಂದು ಬಾವಿಸುವುದನ್ನು ನಿಲ್ಲಿಸಿದಳು.
ಅವರು ತನಗೂಸ್ಕರ ಸ್ವತಃ ಏನೋ ಮಾಡುತ್ತಿದ್ದರು.

ಅವರಿಗೆ ಮಂಜುಗಡ್ಡೆ ಮೇಲೆ ತಿರುಗುತ್ತಾ, ತಿರುಗುತ್ತಾ ಮತ್ತೆ ಹೊಸ ಜೀವ ತುಂಬಿತು, ಇದು ಅಕ್ಷರಶಃ ಒಂದು ಕ್ರಾಂತಿಯೇ.

ದಯವಿಟ್ಟು ಗಮನಿಸಿ. ನನ್ನ ಸ್ನೇಹಿತೆ ತನ್ನ ಕೆಲಸ ಬಿಟ್ಟು ಒಲಂಪಿಕ್ ಮಟ್ಟದ ಸ್ಕೇಟಿಂಗ್ ತರಬೇತುದಾರರ ಕೆಳಗೆ ಒಂದು ವಾರದಲ್ಲಿ 70 ಗಂಟೆಗಳ ಅಧ್ಯಯನ ಮಾಡಲು ಟೊರೊಂಟೊಗೆ ಹೋಗಲಿಲ್ಲ. ಇಲ್ಲ, ಈ ಕಥೆ ತನ್ನ ಯಾವುದೇ ಪದಕಗಳನ್ನು ಗೆಲ್ಲುವದರಿಂದ ಕೊನೆಗೊಂಡಿಲ್ಲ. ವಾಸ್ತವವಾಗಿ, ಈ ಕಥೆಗೆ ಅಂತ್ಯವಿಲ್ಲ. ತನ್ನ ಜೀವನದ ಒಂದು ನಿರ್ದಿಷ್ಟ ಸೌಂದರ್ಯ ಮತ್ತು ಉತ್ಕೃಷ್ಟತೆ ಬಯಲಾಗಲು ಅತ್ಯುತ್ತಮ ಮಾರ್ಗವಾಗಿದೆ ಎಂದುಕೊಂಡು ಸುಸಾನ್ ಇನ್ನೂ ಸ್ಕೇಟಿಂಗ್- ಕೇವಲ ಫಿಗರ್ ಸ್ಕೇಟಿಂಗ್ ಮಾಡುತಿದ್ದಾರೆ. ನಾನು ಇದನ್ನೇ ಸೃಜನಶೀಲ ಬದಕು ಎಂದು ಕರೆಯುತೀನೆ .

ಪ್ರತಿಫಲನಕ್ಕೆ ಬೀಜ ಪ್ರಶ್ನೆ:
"ಸೃಜನಶೀಲ ಬದಕು" ಎಂದರೆ ನಿಮಗೇ ಏನು?
ನಿಮ್ಮ ಜೀವನದಲ್ಲಿ ಆಹ್ಲಾದಕರ ಮತ್ತು ವಿಸ್ಮಯಕ್ಕೆ ಉಂಟುಮಾಡಿದ ಸಮಯದ ಒಂದು ವೈಯಕ್ತಿಕ ಕಥೆ ಹಂಚಿಕೊಳ್ಳಬಹುde?
ನೀವು ಸೃಜನಶೀಲ ಬದಕನ್ನು ಸ್ಪರ್ಶಿಸಲು ಏನು ಸಹಾಯ ಮಾಡುತದೆ?
 

Excerpted from Elizebeth Gilbert's book "Big Magic."


Add Your Reflection

13 Past Reflections